ಖಾಡೆ :ಚುಟುಕು ಪದ್ಯಗಳು
ಮಂಗಳವಾರ, ಜುಲೈ 8, 2014
ಭಾನುವಾರ, ಅಕ್ಟೋಬರ್ 20, 2013
ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ.
ಹನಿಗವಿತೆಗಳು
ನೆನಪುಗಳು
ಆಗೀಗ ಮರುಜನ್ಮ ಪಡೆದು
ಮತ್ತೆ ಮತ್ತೆ ಹುಟ್ಟುತ್ತವೆ
ಸಾವನ್ನು ಮರೆಸುತ್ತ
ಬದುಕನ್ನು ಬಯಲುಗೊಳಿಸುತ್ತ
ಇದ್ದಂತೆ ಇದ್ದು
ಇಲ್ಲದಾಗುತ್ತವೆ
- ಡಾ.ಪ್ರಕಾಶ ಗ. ಖಾಡೆ
***
ಈ ಪ್ರೀತಿ
ಜಗದ ರೀತಿ
ಎಲ್ಲಕ್ಕೂ ಒಂದು ನೀತಿ
ಆದರೂ ಸದಾ
ಜೊತೆಯಲ್ಲೇ
ಇರುತ್ತದೆ ಒಂದು ಭೀತಿ
- ಡಾ.ಪ್ರಕಾಶ ಗ. ಖಾಡೆ
***
ನಮಗೆ ಮಾತ್ರ
ಒಂದು ಕಟ್ಟು ಕಟ್ಟಳೆ
ಎಲ್ಲಿದೆ ಹೇಳಿ
ಹಾರುವ ಹಕ್ಕಿಗೆ
ಬೆಳೆವ ಪೈರಿಗೆ
ಜಗದಗಲದ ವಿಸ್ತಾರದ ಹೆರಿಗೆ
- ಡಾ.ಪ್ರಕಾಶ ಗ. ಖಾಡೆ
***
ಬರೀ ಮಾತುಗಳು
ಇನ್ನೂ ಜೀವಂತವಾಗಿವೆ
ಶಬ್ದಾಲಂಕಾರಗಳಿಂದ ಅಲ್ಲ
ತುಟಿ ಮೇಲೆ ನಿಂತ
ಒಂದು ಸಣ್ಣ ಪ್ರೀತಿಯಿಚಿದ
- ಡಾ.ಪ್ರಕಾಶ ಗ. ಖಾಡೆ
***
ಒಂದಿಷ್ಟು ನಾವು ನಾವೇ
ಪ್ರಶ್ನಿಸಿಕೊಳ್ಳೋಣ:
ಹೇಳಿ
ಈ ಭೂಮಿಯ ಮೇಲಿನ
ಅಸ್ತಿತ್ವದ ಗುರುತಿಗೆ
ನನ್ನದು ನಿಮ್ಮದು ಏನಿದೆ ಇಲ್ಲಿ?
- ಡಾ.ಪ್ರಕಾಶ ಗ. ಖಾಡೆ
***
ನಾವು ಕಟ್ಟುತ್ತೇವೆ
ಕನಸುಗಳ
ಒಂದಲ್ಲ ಸಾವಿರ
ಅವರು ಕೆಡವುತ್ತಾರೆ
ಪ್ರೀತಿಯ ಬಂಧಗಳ
ಇಂದಲ್ಲ ಈಗಲೆ.
- ಡಾ.ಪ್ರಕಾಶ ಗ. ಖಾಡೆ
***
ನಿನಗೆ ಬರೆಯಬೇಕೆನಿಸಿದಾಗಲೆಲ್ಲ
ಈ ಪೆನ್ನು ಹಾಳೆ
ಸಿಕ್ಕುವುದಿಲ್ಲ !
ನೀನೇ ಸಿಕ್ಕಾಗ
ಈ ಮಾತು ಈ ನುಡಿಗಳೇ
ಹೊರಡುವುದಿಲ್ಲ
- ಡಾ.ಪ್ರಕಾಶ ಗ. ಖಾಡೆ
***
ದೇವರ ಹೆಸರಿಗೆ
ನಮಸ್ಕಾರ, ಪುರಸ್ಕಾರ
ನಿನ್ನ ಪ್ರೀತಿಗೆ
ನಿತ್ಯ ಜೀವಂತಿಕೆಯ ಸ್ವೀಕಾರ
- ಡಾ.ಪ್ರಕಾಶ ಗ. ಖಾಡೆ
***
ಮೊದಲು ಗೊತ್ತಿರಲಿಲ್ಲ
ಪ್ರೀತಿಗೆ
ಇರುತ್ತದೆ ಎಂದು
ಇಷ್ಟೊಂದು ಆಕರ್ಷ
ಈಗ ಅರಿವಾಗುವ
ಹೊತ್ತಿಗೆ ಕಳಕೊಂಡ ಸ್ಪರ್ಶ
- ಡಾ.ಪ್ರಕಾಶ ಗ. ಖಾಡೆ
***
ಏಣಿಗೆ
ಮೆಟ್ಟಿಲುಗಳು
ಎಂದು ಹೇಳುತ್ತೇವೆ
ಕೇಳಿ ನೋಡಿ
ಮೆಟ್ಟಿಲುಗಳು ನಮಗೆ
- ಡಾ.ಪ್ರಕಾಶ ಗ. ಖಾಡೆ
***
ಒಂದೇ ರಾತ್ರಿಗೆ
ಉರಿಸುವ ದೀಪ
ಹೊತ್ತಿಸಿದ ಬೆಳಕ
ನೀಡುತ್ತದೆ ಎಷ್ಟೊಂದು ಹಗಲು
ಇಲ್ಲಿ ಕತ್ತಲೆಗೆ ಜೊತೆಯಿಲ್ಲ
- ಡಾ.ಪ್ರಕಾಶ ಗ. ಖಾಡೆ
***
ನಾವು
ಯಾವುದಕೆ ಪ್ರೀತಿ
ಎನ್ನುತ್ತೇವೆಯೋ
ಅದು ನಮಗಷ್ಟೇ ಗೊತ್ತು
ಅದೇ ಪ್ರಿತಿಯ ಅರ್ಥ
- ಡಾ.ಪ್ರಕಾಶ ಗ. ಖಾಡೆ
***
ಬೆಳ್ಳಗಿರುವುದೆಲ್ಲ ಹಾಲಲ್ಲ
ಎನ್ನುತ್ತಾರೆ: ಅದು ಖರೇ
ಕಪ್ಪಗಿರುವುದೂ ಕತ್ತಲಲ್ಲ
ಬೆಳಕಿನ ಬಸಿರು
- ಡಾ.ಪ್ರಕಾಶ ಗ. ಖಾಡೆ
***
ವಿರಹದ ಬಗ್ಗೆ
ಮಾತುಗಳಲ್ಲಿ ಹೇಳಬಾರದು
ಅನುಭವಿಸಿದವರ
ನೋವುಗಳಿಗೆ
ಮತ್ತೆ ಮತ್ತೆ
ಬರೆ ಹಾಕ ಬಾರದು
- ಡಾ.ಪ್ರಕಾಶ ಗ. ಖಾಡೆ
***
ನನ್ನ ಸಾಲುಗಳು
ಸದಾ ಚಡಪಡಿಸುತ್ತವೆ
ನಿಮ್ಮೊಳಗಿನ
ಭಾವನೆಗಳ ಜೊತೆಗೆ
ಒಂದಾಗಲು ; ಸದಾ
ಜೀವಂತವಾಗಿರಲು
- ಡಾ.ಪ್ರಕಾಶ ಗ. ಖಾಡೆ
***
ಹೋರಾಟ
ಪ್ರತಿಭಟನೆಗೆ ಒಂದು
ಸಣ್ಣ ಉದಾಹರಣೆ ;
ಕಾಗೆ ಗೂಡಲ್ಲಿ ಬೆಳೆವ
ಮರಿ ಕೋಗಿಲೆಚಿiÀು
ಬೆಳವಣಿಗೆ
- ಡಾ.ಪ್ರಕಾಶ ಗ. ಖಾಡೆ
***
ಇಲ್ಲಿ ಎಲ್ಲವೂ
ನಡೆಯುತ್ತದೆ ;
ಸುಮ್ಮನೆ ನಿಂತವರೂ
ಹಾಗೇ ಹೇಳುತ್ತಾರೆ
- ಡಾ.ಪ್ರಕಾಶ ಗ. ಖಾಡೆ
***
ಈ ಕಂಗಳು
ಹೊರ ನೋಟಕ್ಕೆ
ಬರೀ ರೆಪ್ಪೆ ಒಳಗಿನ
ಗುಡ್ಡೆ, ಒಂದಿಷ್ಟು
ಹನಿ ತರಿಸುವ ರಸಧಾರೆ
ಇಷ್ಟೇ ಅಲ್ಲ
ಬಾವನೆಗಳ ಮಹಾಪೂರ
- ಡಾ.ಪ್ರಕಾಶ ಗ. ಖಾಡೆ
ಚಿಗುರು
ತುಂಬಿಕೊಂಡ ಹಸಿರು
ಭೂದೇವಿಯ
ಸಾಕ್ಷಿಯಾದ ಬಸಿರು
- ಡಾ.ಪ್ರಕಾಶ ಗ. ಖಾಡೆ
***
ಕಗ್ಗತ್ತಲ ದಾರಿಯಲ್ಲಿ
ಬಾನ ಚುಕ್ಕಿಗಳದೇ ಬೆಳಕು;
ಬೆಂಗಾಡಿನ ಹಾದಿಯಲ್ಲಿ
ವರತೆಗೆ ಸಿಕ್ಕುವ
ನೀರೇ ಜೀವನದಿ
- ಡಾ.ಪ್ರಕಾಶ ಗ. ಖಾಡೆ
ಭಾವನೆಗಳು
ಬರೀ ಆಡಲು ಅಲ್ಲ
ಹಂಚಿಕೊಳ್ಳಲು ಮತ್ತು
ಒಂದಿಷ್ಟು ಬೆಚ್ಚಗೆ
ಪುಟ್ಟ ಹ್ಲದಯದಲ್ಲಿ
ಬಚ್ಚಿಟ್ಟುಕೋಳ್ಳಲು
- ಡಾ.ಪ್ರಕಾಶ ಗ. ಖಾಡೆ
***
ಕಾಯಲು
ಮತ್ತೇ ನಾಳೆಗಳಿವೆ
ಹಾಗಂತ
ಕಳೆದು ಹೋಗುವ
ದಿನಗಳೂ ಇವೆ
- ಡಾ.ಪ್ರಕಾಶ ಗ. ಖಾಡೆ
ನೀವೇ
ಆರಿಸಿಕೊಳ್ಳಿ
ಇಂದೇ ಈಗಲೇ
ಉಳಿದಿಲ್ಲ ನಾಳೆಗೆ
ಇಂಥದೇ ಗಳಿಗೆ
- ಡಾ.ಪ್ರಕಾಶ ಗ. ಖಾಡೆ
***
ನಾವೂ
ಜೋರು ಮಾಡಬಹುದು
ಸಿಕ್ಕವರ ಮೇಲೆ
ಏನು ಉಳಿಯುತ್ತದೆ ಹೇಳಿ
ಇಲ್ಲಿ ಪ್ರೀತಿ ಇರದ ಮೇಲೆ
- ಡಾ.ಪ್ರಕಾಶ ಗ. ಖಾಡೆ
***
ಬೇಜಾರು
ಅನಿಸಿದ್ದರೆ
ಒಂದಿಷ್ಟು ಮಗ್ಗಲು ಬದಲಿಸಿ
ಸಿಕ್ಕಬಹುದು
ಮತ್ತೇ ಬೀಳಬಹುದು
ಒಂದಿಷ್ಟು ಹೊಸ ಕನಸುಗಳು
- ಡಾ.ಪ್ರಕಾಶ ಗ. ಖಾಡೆ
***
ನಮ್ಮ ನೇರಕೆ
ಎಲ್ಲ ಇರಲಿಬಿಡು ಎನ್ನುತ್ತೇವೆ
ನಾವೇ ವಕ್ರದಲ್ಲಿ
ನಿಂತು ನಿರ್ದೇಶಿಸುತ್ತೇವೆ
- ಡಾ.ಪ್ರಕಾಶ ಗ. ಖಾಡೆ
ಸರಳ ರೇಖೆ
ಎಳೆದಂತೆಲ್ಲ ಒಂದೇ ದಾರಿ
ಅಡ್ಡಕ್ಕೆ ಬಂದಾಗಲೂ
ಹರಿಯುವುದು ಅದೇ ಸರಿದಾರಿ
- ಡಾ.ಪ್ರಕಾಶ ಗ. ಖಾಡೆ
***
ಮಾತುಗಳನ್ನು
ಜೋಪಾನವಾಗಿ
ಕಟ್ಟಿಟ್ಟುಕೊಂಡು
ನಿನ್ನೆದಿರು ಬಿಚ್ಚಿ
ಹರವಿದಾಗ ಉಳಿದಿಲ್ಲ
ಒಂದಕ್ಕೂ ತುದಿ ಮೊದಲು
ಹಾಗಂತ ಕಣ್ಣುಗಳಿಗೇ
ಹೇಳಿಬಿಡು ಆಡಲು ನಾಲ್ಕು ಮಾತು
- - ಡಾ.ಪ್ರಕಾಶ ಗ. ಖಾಡೆ
***
ಆಗಸದ ಚುಕ್ಕೆಗಳಿಗೆ
ಅದರದೇ ಬೆಳಕು
ನಿನ್ನ ನಗೆಗೂ
ಅದರದೇ ಬೆಳಕು
- ಡಾ.ಪ್ರಕಾಶ ಗ. ಖಾಡೆ
***
ಎಡವಿ ಬಿದ್ದಾಗ
ಜೋಪಾನ ಎನ್ನುತ್ತೇವೆ
ಪಾನ ಮತ್ತರಿಗೆ
ಅವರಿಗೆ ಕೇಳಿಸುವುದೇ
ಇಲ್ಲ, ಬೀಳುವುದೇ
ಅಭ್ಯಾಸವಾಗಿರುವಾಗ !
- ಡಾ.ಪ್ರಕಾಶ ಗ. ಖಾಡೆ
***
ಈ ದೇಹ
ಮಾಂಸ ಖಂಡಗಳ ಮುದ್ದೆ
ಹೇಳುತ್ತಾರೆ ವೇದಾಂತಿಗಳು
ಕೇಳಿನೋಡಿ ಇದರೊಳಗಿನ ಶಕ್ತಿ
ಬುದ್ದಿಮತ್ತೆ ಎಷ್ಟೊಂದು
ಸೃಷ್ಠಿಸಿದೆ ಮತ್ತೆ ಮತ್ತೆ
- ಡಾ.ಪ್ರಕಾಶ ಗ. ಖಾಡೆ
***
ಆಗೀಗ
ಬರೆಯುತ್ತಲೇ
ಇರುತ್ತೇವೆ ಬರೀ ಹಾಳೆಗಳಲ್ಲಿ
ಅಳಿಸಿ ಹೋಗುತ್ತವೆ
ಅರಿವಿಲ್ಲದ ಗಳಿಗೆಗಳಲ್ಲಿ
- ಡಾ.ಪ್ರಕಾಶ ಗ. ಖಾಡೆ
***
ಈ ಸಾಲುಗಳು
ನನ್ನ ಸಾಲು ದೀಪಗಳು
ಹೊತ್ತಿಸಿಕೊಳ್ಳಿ
ನೀವೂ ಬಂದಷ್ಟು ಬೆಳಕು
ಅಂದಾಗ
ಸಾರ್ಥಕತೆ ನನ್ನ ಕವಿತೆ
- ಡಾ.ಪ್ರಕಾಶ ಗ. ಖಾಡೆ
ಕಾಮ
ಹುಟ್ಟುತ್ತದೆ
ಮಿಲನ
ಅನುಭವಿಸುತ್ತದೆ
ತೃಪ್ತಿ
ಸಾಯುತ್ತದೆ
- ಡಾ.ಪ್ರಕಾಶ ಗ. ಖಾಡೆ
***
ಪ್ರೀತಿಗೆ
ನಾವು ಬಯಲಾಗುತ್ತೇವೆ
ಅವರು
ಗೋಡೆ ಕಟ್ಟುತ್ತಾರೆ
- ಡಾ.ಪ್ರಕಾಶ ಗ. ಖಾಡೆ
***
ಒಂದು ಸಾಮಾನ್ಯ ಕವಿತೆ
ಬರೆಸಿಕೊಳ್ಳುತ್ತದೆ
ಇಲ್ಲಿ ಒಂದಿಷ್ಟು
ಸಾಲುಗಳು ಹುಟ್ಟಿ
ಸಾಯುತ್ತವೆ
ಇದು ಕವಿತೆಯ
ರಚನೆಯ ಕರ್ಮ
- ಡಾ.ಪ್ರಕಾಶ ಗ. ಖಾಡೆ
***
ಕಾರಣವಿಲ್ಲದೆ
ಒಂದು ಎಳೆಗರಿಕೆ
ಅಳುಗಾಡದೆ ಇಲ್ಲ
ಹಾಗೆ
ಹುಟ್ಟುವ ಪ್ರೀತಿಗೆ
ಏನು ಕಾರಣ
- ಡಾ.ಪ್ರಕಾಶ ಗ. ಖಾಡೆ
***
ಈ ಮುಂಜಾವು
ತೆರೆದುಕೊಳ್ಳುತ್ತದೆ
ನಡುಹಗಲು
ದೂರ ನಡೆಸುತ್ತದೆ
ರಾತ್ರಿ ಬೆಚ್ಚಗೆ
ಅಪ್ಪಿಕೊಳ್ಳುತ್ತದೆ
- ಡಾ.ಪ್ರಕಾಶ ಗ. ಖಾಡೆ
***
ಕೊರಡಲ್ಲಿ
ಜೀವ ಪಡೆದ ಶಿಲ್ಪ
ಅದರ ಹುಟ್ಟಿನ
ಚಿಗುರು ಮರೆಸುತ್ತದೆ
- ಡಾ.ಪ್ರಕಾಶ ಗ. ಖಾಡೆ
***
***
ಹರಿವ ಮನಸ್ಸು
ಕಟ್ಟಿಡಲು ಒಂದು
ಸಣ್ಣ ಎಳೆ ಸಾಕು
ಈ ಎಳೆ
ದಕ್ಕುವುದು
ಒಂದು ಏಕಾಂಗದ
ಧ್ಯಾನದಲ್ಲಿ
- ಡಾ.ಪ್ರಕಾಶ ಗ. ಖಾಡೆ
***
ಎದುರಿಗೆ
ಸಿಕ್ಕವನಲ್ಲೂ
ಒಂದು ಇತಿಹಾಸವಿದೆ
ನಿಂತು ಹೇಳಿಕೊಳ್ಳಲು
ಅವನಿಗೂ
ಒಂದು ಭೂಗೋಲವಿಲ್ಲ
- ಡಾ.ಪ್ರಕಾಶ ಗ. ಖಾಡೆ
***
ಖಾಲಿ ಎನ್ನಿಸಿದಾಗ
ಮನಸ್ಸು
ತುಂಬಬೇಕೆನಿಸುವುದಿಲ್ಲ
ತುಳಕಬೇಕೆನಿಸುತ್ತದೆ
- ಡಾ.ಪ್ರಕಾಶ ಗ. ಖಾಡೆ
***
ನೀನು
ದಾರಿಯಲ್ಲಿ ಸಿಕ್ಕಾಗ
ಹಂಚಿಕೊಳ್ಳಲು ಒಂದಿಷ್ಟು
ಮಾತುಗಳು ಕಟ್ಟಿಟ್ಟಿದ್ದೇನೆ
ಕೇಳಿಸಿಕೊಳ್ಳಲು
ತುಂಡು ಜಾಗೆ
ನಿನ್ನ ಹೃದಯದ ಮೂಲೆಯಲ್ಲಿ
ಮೀಸಲಿಡು
- ಡಾ.ಪ್ರಕಾಶ ಗ. ಖಾಡೆ
ನೆನಪಿಗೆ
ಇರಲಿ ಎಂದು
ಆಗೀಗಿನ ಮಾತು
ಮೆಲಕುಗಳನ್ನು
ಮರೆಯದೆ ಇಟ್ಟುಕೊಂಡಿದ್ದೇನೆ
ಸಾಕ್ಷಿಗೆ ನೀನೆ
ಮರುಕಳಿಸಬೇಕು ನೆನಪು
- ಡಾ.ಪ್ರಕಾಶ ಗ. ಖಾಡೆ
***
ಪ್ರೀತಿ
ಒಂದು ಒಗಟು
ಅದಕ್ಕೆ
ನೀನು ಉತ್ತರ
- ಡಾ.ಪ್ರಕಾಶ ಗ. ಖಾಡೆ
***
ಪ್ರಾಯದ
ದಂಡನೆಗೆ
ಜಯದ ಸೋಲು
ಅಭಿ
ಪ್ರಾಯದ ಮಾತು
ಬರೀ ಹೇಳಿಕೊಳ್ಳಲು
- ಡಾ.ಪ್ರಕಾಶ ಗ. ಖಾಡೆ
***
ಈ ದಿನಕೆ
ಇಷ್ಟು ಸಾಕು ಕವಿತೆ
ಇದು ನಿರಂತರ ಹೆರಿಗೆ
- ಡಾ.ಪ್ರಕಾಶ ಗ. ಖಾಡೆ
-
ವಿಳಾಸ:
ಡಾ.ಪ್ರಕಾಶ ಗ.ಖಾಡೆ, ’ಶ್ರೀಗುರು’ ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ. ಮೊ.9845500890
ಹನಿಗವಿತೆಗಳು
ನೆನಪುಗಳು
ಆಗೀಗ ಮರುಜನ್ಮ ಪಡೆದು
ಮತ್ತೆ ಮತ್ತೆ ಹುಟ್ಟುತ್ತವೆ
ಸಾವನ್ನು ಮರೆಸುತ್ತ
ಬದುಕನ್ನು ಬಯಲುಗೊಳಿಸುತ್ತ
ಇದ್ದಂತೆ ಇದ್ದು
ಇಲ್ಲದಾಗುತ್ತವೆ
- ಡಾ.ಪ್ರಕಾಶ ಗ. ಖಾಡೆ
***
ಈ ಪ್ರೀತಿ
ಜಗದ ರೀತಿ
ಎಲ್ಲಕ್ಕೂ ಒಂದು ನೀತಿ
ಆದರೂ ಸದಾ
ಜೊತೆಯಲ್ಲೇ
ಇರುತ್ತದೆ ಒಂದು ಭೀತಿ
- ಡಾ.ಪ್ರಕಾಶ ಗ. ಖಾಡೆ
***
ನಮಗೆ ಮಾತ್ರ
ಒಂದು ಕಟ್ಟು ಕಟ್ಟಳೆ
ಎಲ್ಲಿದೆ ಹೇಳಿ
ಹಾರುವ ಹಕ್ಕಿಗೆ
ಬೆಳೆವ ಪೈರಿಗೆ
ಜಗದಗಲದ ವಿಸ್ತಾರದ ಹೆರಿಗೆ
- ಡಾ.ಪ್ರಕಾಶ ಗ. ಖಾಡೆ
***
ಬರೀ ಮಾತುಗಳು
ಇನ್ನೂ ಜೀವಂತವಾಗಿವೆ
ಶಬ್ದಾಲಂಕಾರಗಳಿಂದ ಅಲ್ಲ
ತುಟಿ ಮೇಲೆ ನಿಂತ
ಒಂದು ಸಣ್ಣ ಪ್ರೀತಿಯಿಚಿದ
- ಡಾ.ಪ್ರಕಾಶ ಗ. ಖಾಡೆ
***
ಒಂದಿಷ್ಟು ನಾವು ನಾವೇ
ಪ್ರಶ್ನಿಸಿಕೊಳ್ಳೋಣ:
ಹೇಳಿ
ಈ ಭೂಮಿಯ ಮೇಲಿನ
ಅಸ್ತಿತ್ವದ ಗುರುತಿಗೆ
ನನ್ನದು ನಿಮ್ಮದು ಏನಿದೆ ಇಲ್ಲಿ?
- ಡಾ.ಪ್ರಕಾಶ ಗ. ಖಾಡೆ
***
ನಾವು ಕಟ್ಟುತ್ತೇವೆ
ಕನಸುಗಳ
ಒಂದಲ್ಲ ಸಾವಿರ
ಅವರು ಕೆಡವುತ್ತಾರೆ
ಪ್ರೀತಿಯ ಬಂಧಗಳ
ಇಂದಲ್ಲ ಈಗಲೆ.
- ಡಾ.ಪ್ರಕಾಶ ಗ. ಖಾಡೆ
***
ನಿನಗೆ ಬರೆಯಬೇಕೆನಿಸಿದಾಗಲೆಲ್ಲ
ಈ ಪೆನ್ನು ಹಾಳೆ
ಸಿಕ್ಕುವುದಿಲ್ಲ !
ನೀನೇ ಸಿಕ್ಕಾಗ
ಈ ಮಾತು ಈ ನುಡಿಗಳೇ
ಹೊರಡುವುದಿಲ್ಲ
- ಡಾ.ಪ್ರಕಾಶ ಗ. ಖಾಡೆ
***
ದೇವರ ಹೆಸರಿಗೆ
ನಮಸ್ಕಾರ, ಪುರಸ್ಕಾರ
ನಿನ್ನ ಪ್ರೀತಿಗೆ
ನಿತ್ಯ ಜೀವಂತಿಕೆಯ ಸ್ವೀಕಾರ
- ಡಾ.ಪ್ರಕಾಶ ಗ. ಖಾಡೆ
***
ಮೊದಲು ಗೊತ್ತಿರಲಿಲ್ಲ
ಪ್ರೀತಿಗೆ
ಇರುತ್ತದೆ ಎಂದು
ಇಷ್ಟೊಂದು ಆಕರ್ಷ
ಈಗ ಅರಿವಾಗುವ
ಹೊತ್ತಿಗೆ ಕಳಕೊಂಡ ಸ್ಪರ್ಶ
- ಡಾ.ಪ್ರಕಾಶ ಗ. ಖಾಡೆ
***
ಏಣಿಗೆ
ಮೆಟ್ಟಿಲುಗಳು
ಎಂದು ಹೇಳುತ್ತೇವೆ
ಕೇಳಿ ನೋಡಿ
ಮೆಟ್ಟಿಲುಗಳು ನಮಗೆ
- ಡಾ.ಪ್ರಕಾಶ ಗ. ಖಾಡೆ
***
ಒಂದೇ ರಾತ್ರಿಗೆ
ಉರಿಸುವ ದೀಪ
ಹೊತ್ತಿಸಿದ ಬೆಳಕ
ನೀಡುತ್ತದೆ ಎಷ್ಟೊಂದು ಹಗಲು
ಇಲ್ಲಿ ಕತ್ತಲೆಗೆ ಜೊತೆಯಿಲ್ಲ
- ಡಾ.ಪ್ರಕಾಶ ಗ. ಖಾಡೆ
***
ನಾವು
ಯಾವುದಕೆ ಪ್ರೀತಿ
ಎನ್ನುತ್ತೇವೆಯೋ
ಅದು ನಮಗಷ್ಟೇ ಗೊತ್ತು
ಅದೇ ಪ್ರಿತಿಯ ಅರ್ಥ
- ಡಾ.ಪ್ರಕಾಶ ಗ. ಖಾಡೆ
***
ಬೆಳ್ಳಗಿರುವುದೆಲ್ಲ ಹಾಲಲ್ಲ
ಎನ್ನುತ್ತಾರೆ: ಅದು ಖರೇ
ಕಪ್ಪಗಿರುವುದೂ ಕತ್ತಲಲ್ಲ
ಬೆಳಕಿನ ಬಸಿರು
- ಡಾ.ಪ್ರಕಾಶ ಗ. ಖಾಡೆ
***
ವಿರಹದ ಬಗ್ಗೆ
ಮಾತುಗಳಲ್ಲಿ ಹೇಳಬಾರದು
ಅನುಭವಿಸಿದವರ
ನೋವುಗಳಿಗೆ
ಮತ್ತೆ ಮತ್ತೆ
ಬರೆ ಹಾಕ ಬಾರದು
- ಡಾ.ಪ್ರಕಾಶ ಗ. ಖಾಡೆ
***
ನನ್ನ ಸಾಲುಗಳು
ಸದಾ ಚಡಪಡಿಸುತ್ತವೆ
ನಿಮ್ಮೊಳಗಿನ
ಭಾವನೆಗಳ ಜೊತೆಗೆ
ಒಂದಾಗಲು ; ಸದಾ
ಜೀವಂತವಾಗಿರಲು
- ಡಾ.ಪ್ರಕಾಶ ಗ. ಖಾಡೆ
***
ಹೋರಾಟ
ಪ್ರತಿಭಟನೆಗೆ ಒಂದು
ಸಣ್ಣ ಉದಾಹರಣೆ ;
ಕಾಗೆ ಗೂಡಲ್ಲಿ ಬೆಳೆವ
ಮರಿ ಕೋಗಿಲೆಚಿiÀು
ಬೆಳವಣಿಗೆ
- ಡಾ.ಪ್ರಕಾಶ ಗ. ಖಾಡೆ
***
ಇಲ್ಲಿ ಎಲ್ಲವೂ
ನಡೆಯುತ್ತದೆ ;
ಸುಮ್ಮನೆ ನಿಂತವರೂ
ಹಾಗೇ ಹೇಳುತ್ತಾರೆ
- ಡಾ.ಪ್ರಕಾಶ ಗ. ಖಾಡೆ
***
ಈ ಕಂಗಳು
ಹೊರ ನೋಟಕ್ಕೆ
ಬರೀ ರೆಪ್ಪೆ ಒಳಗಿನ
ಗುಡ್ಡೆ, ಒಂದಿಷ್ಟು
ಹನಿ ತರಿಸುವ ರಸಧಾರೆ
ಇಷ್ಟೇ ಅಲ್ಲ
ಬಾವನೆಗಳ ಮಹಾಪೂರ
- ಡಾ.ಪ್ರಕಾಶ ಗ. ಖಾಡೆ
ಚಿಗುರು
ತುಂಬಿಕೊಂಡ ಹಸಿರು
ಭೂದೇವಿಯ
ಸಾಕ್ಷಿಯಾದ ಬಸಿರು
- ಡಾ.ಪ್ರಕಾಶ ಗ. ಖಾಡೆ
***
ಕಗ್ಗತ್ತಲ ದಾರಿಯಲ್ಲಿ
ಬಾನ ಚುಕ್ಕಿಗಳದೇ ಬೆಳಕು;
ಬೆಂಗಾಡಿನ ಹಾದಿಯಲ್ಲಿ
ವರತೆಗೆ ಸಿಕ್ಕುವ
ನೀರೇ ಜೀವನದಿ
- ಡಾ.ಪ್ರಕಾಶ ಗ. ಖಾಡೆ
ಭಾವನೆಗಳು
ಬರೀ ಆಡಲು ಅಲ್ಲ
ಹಂಚಿಕೊಳ್ಳಲು ಮತ್ತು
ಒಂದಿಷ್ಟು ಬೆಚ್ಚಗೆ
ಪುಟ್ಟ ಹ್ಲದಯದಲ್ಲಿ
ಬಚ್ಚಿಟ್ಟುಕೋಳ್ಳಲು
- ಡಾ.ಪ್ರಕಾಶ ಗ. ಖಾಡೆ
***
ಕಾಯಲು
ಮತ್ತೇ ನಾಳೆಗಳಿವೆ
ಹಾಗಂತ
ಕಳೆದು ಹೋಗುವ
ದಿನಗಳೂ ಇವೆ
- ಡಾ.ಪ್ರಕಾಶ ಗ. ಖಾಡೆ
ನೀವೇ
ಆರಿಸಿಕೊಳ್ಳಿ
ಇಂದೇ ಈಗಲೇ
ಉಳಿದಿಲ್ಲ ನಾಳೆಗೆ
ಇಂಥದೇ ಗಳಿಗೆ
- ಡಾ.ಪ್ರಕಾಶ ಗ. ಖಾಡೆ
***
ನಾವೂ
ಜೋರು ಮಾಡಬಹುದು
ಸಿಕ್ಕವರ ಮೇಲೆ
ಏನು ಉಳಿಯುತ್ತದೆ ಹೇಳಿ
ಇಲ್ಲಿ ಪ್ರೀತಿ ಇರದ ಮೇಲೆ
- ಡಾ.ಪ್ರಕಾಶ ಗ. ಖಾಡೆ
***
ಬೇಜಾರು
ಅನಿಸಿದ್ದರೆ
ಒಂದಿಷ್ಟು ಮಗ್ಗಲು ಬದಲಿಸಿ
ಸಿಕ್ಕಬಹುದು
ಮತ್ತೇ ಬೀಳಬಹುದು
ಒಂದಿಷ್ಟು ಹೊಸ ಕನಸುಗಳು
- ಡಾ.ಪ್ರಕಾಶ ಗ. ಖಾಡೆ
***
ನಮ್ಮ ನೇರಕೆ
ಎಲ್ಲ ಇರಲಿಬಿಡು ಎನ್ನುತ್ತೇವೆ
ನಾವೇ ವಕ್ರದಲ್ಲಿ
ನಿಂತು ನಿರ್ದೇಶಿಸುತ್ತೇವೆ
- ಡಾ.ಪ್ರಕಾಶ ಗ. ಖಾಡೆ
ಸರಳ ರೇಖೆ
ಎಳೆದಂತೆಲ್ಲ ಒಂದೇ ದಾರಿ
ಅಡ್ಡಕ್ಕೆ ಬಂದಾಗಲೂ
ಹರಿಯುವುದು ಅದೇ ಸರಿದಾರಿ
- ಡಾ.ಪ್ರಕಾಶ ಗ. ಖಾಡೆ
***
ಮಾತುಗಳನ್ನು
ಜೋಪಾನವಾಗಿ
ಕಟ್ಟಿಟ್ಟುಕೊಂಡು
ನಿನ್ನೆದಿರು ಬಿಚ್ಚಿ
ಹರವಿದಾಗ ಉಳಿದಿಲ್ಲ
ಒಂದಕ್ಕೂ ತುದಿ ಮೊದಲು
ಹಾಗಂತ ಕಣ್ಣುಗಳಿಗೇ
ಹೇಳಿಬಿಡು ಆಡಲು ನಾಲ್ಕು ಮಾತು
- - ಡಾ.ಪ್ರಕಾಶ ಗ. ಖಾಡೆ
***
ಆಗಸದ ಚುಕ್ಕೆಗಳಿಗೆ
ಅದರದೇ ಬೆಳಕು
ನಿನ್ನ ನಗೆಗೂ
ಅದರದೇ ಬೆಳಕು
- ಡಾ.ಪ್ರಕಾಶ ಗ. ಖಾಡೆ
***
ಎಡವಿ ಬಿದ್ದಾಗ
ಜೋಪಾನ ಎನ್ನುತ್ತೇವೆ
ಪಾನ ಮತ್ತರಿಗೆ
ಅವರಿಗೆ ಕೇಳಿಸುವುದೇ
ಇಲ್ಲ, ಬೀಳುವುದೇ
ಅಭ್ಯಾಸವಾಗಿರುವಾಗ !
- ಡಾ.ಪ್ರಕಾಶ ಗ. ಖಾಡೆ
***
ಈ ದೇಹ
ಮಾಂಸ ಖಂಡಗಳ ಮುದ್ದೆ
ಹೇಳುತ್ತಾರೆ ವೇದಾಂತಿಗಳು
ಕೇಳಿನೋಡಿ ಇದರೊಳಗಿನ ಶಕ್ತಿ
ಬುದ್ದಿಮತ್ತೆ ಎಷ್ಟೊಂದು
ಸೃಷ್ಠಿಸಿದೆ ಮತ್ತೆ ಮತ್ತೆ
- ಡಾ.ಪ್ರಕಾಶ ಗ. ಖಾಡೆ
***
ಆಗೀಗ
ಬರೆಯುತ್ತಲೇ
ಇರುತ್ತೇವೆ ಬರೀ ಹಾಳೆಗಳಲ್ಲಿ
ಅಳಿಸಿ ಹೋಗುತ್ತವೆ
ಅರಿವಿಲ್ಲದ ಗಳಿಗೆಗಳಲ್ಲಿ
- ಡಾ.ಪ್ರಕಾಶ ಗ. ಖಾಡೆ
***
ಈ ಸಾಲುಗಳು
ನನ್ನ ಸಾಲು ದೀಪಗಳು
ಹೊತ್ತಿಸಿಕೊಳ್ಳಿ
ನೀವೂ ಬಂದಷ್ಟು ಬೆಳಕು
ಅಂದಾಗ
ಸಾರ್ಥಕತೆ ನನ್ನ ಕವಿತೆ
- ಡಾ.ಪ್ರಕಾಶ ಗ. ಖಾಡೆ
ಕಾಮ
ಹುಟ್ಟುತ್ತದೆ
ಮಿಲನ
ಅನುಭವಿಸುತ್ತದೆ
ತೃಪ್ತಿ
ಸಾಯುತ್ತದೆ
- ಡಾ.ಪ್ರಕಾಶ ಗ. ಖಾಡೆ
***
ಪ್ರೀತಿಗೆ
ನಾವು ಬಯಲಾಗುತ್ತೇವೆ
ಅವರು
ಗೋಡೆ ಕಟ್ಟುತ್ತಾರೆ
- ಡಾ.ಪ್ರಕಾಶ ಗ. ಖಾಡೆ
***
ಒಂದು ಸಾಮಾನ್ಯ ಕವಿತೆ
ಬರೆಸಿಕೊಳ್ಳುತ್ತದೆ
ಇಲ್ಲಿ ಒಂದಿಷ್ಟು
ಸಾಲುಗಳು ಹುಟ್ಟಿ
ಸಾಯುತ್ತವೆ
ಇದು ಕವಿತೆಯ
ರಚನೆಯ ಕರ್ಮ
- ಡಾ.ಪ್ರಕಾಶ ಗ. ಖಾಡೆ
***
ಕಾರಣವಿಲ್ಲದೆ
ಒಂದು ಎಳೆಗರಿಕೆ
ಅಳುಗಾಡದೆ ಇಲ್ಲ
ಹಾಗೆ
ಹುಟ್ಟುವ ಪ್ರೀತಿಗೆ
ಏನು ಕಾರಣ
- ಡಾ.ಪ್ರಕಾಶ ಗ. ಖಾಡೆ
***
ಈ ಮುಂಜಾವು
ತೆರೆದುಕೊಳ್ಳುತ್ತದೆ
ನಡುಹಗಲು
ದೂರ ನಡೆಸುತ್ತದೆ
ರಾತ್ರಿ ಬೆಚ್ಚಗೆ
ಅಪ್ಪಿಕೊಳ್ಳುತ್ತದೆ
- ಡಾ.ಪ್ರಕಾಶ ಗ. ಖಾಡೆ
***
ಕೊರಡಲ್ಲಿ
ಜೀವ ಪಡೆದ ಶಿಲ್ಪ
ಅದರ ಹುಟ್ಟಿನ
ಚಿಗುರು ಮರೆಸುತ್ತದೆ
- ಡಾ.ಪ್ರಕಾಶ ಗ. ಖಾಡೆ
***
***
ಹರಿವ ಮನಸ್ಸು
ಕಟ್ಟಿಡಲು ಒಂದು
ಸಣ್ಣ ಎಳೆ ಸಾಕು
ಈ ಎಳೆ
ದಕ್ಕುವುದು
ಒಂದು ಏಕಾಂಗದ
ಧ್ಯಾನದಲ್ಲಿ
- ಡಾ.ಪ್ರಕಾಶ ಗ. ಖಾಡೆ
***
ಎದುರಿಗೆ
ಸಿಕ್ಕವನಲ್ಲೂ
ಒಂದು ಇತಿಹಾಸವಿದೆ
ನಿಂತು ಹೇಳಿಕೊಳ್ಳಲು
ಅವನಿಗೂ
ಒಂದು ಭೂಗೋಲವಿಲ್ಲ
- ಡಾ.ಪ್ರಕಾಶ ಗ. ಖಾಡೆ
***
ಖಾಲಿ ಎನ್ನಿಸಿದಾಗ
ಮನಸ್ಸು
ತುಂಬಬೇಕೆನಿಸುವುದಿಲ್ಲ
ತುಳಕಬೇಕೆನಿಸುತ್ತದೆ
- ಡಾ.ಪ್ರಕಾಶ ಗ. ಖಾಡೆ
***
ನೀನು
ದಾರಿಯಲ್ಲಿ ಸಿಕ್ಕಾಗ
ಹಂಚಿಕೊಳ್ಳಲು ಒಂದಿಷ್ಟು
ಮಾತುಗಳು ಕಟ್ಟಿಟ್ಟಿದ್ದೇನೆ
ಕೇಳಿಸಿಕೊಳ್ಳಲು
ತುಂಡು ಜಾಗೆ
ನಿನ್ನ ಹೃದಯದ ಮೂಲೆಯಲ್ಲಿ
ಮೀಸಲಿಡು
- ಡಾ.ಪ್ರಕಾಶ ಗ. ಖಾಡೆ
ನೆನಪಿಗೆ
ಇರಲಿ ಎಂದು
ಆಗೀಗಿನ ಮಾತು
ಮೆಲಕುಗಳನ್ನು
ಮರೆಯದೆ ಇಟ್ಟುಕೊಂಡಿದ್ದೇನೆ
ಸಾಕ್ಷಿಗೆ ನೀನೆ
ಮರುಕಳಿಸಬೇಕು ನೆನಪು
- ಡಾ.ಪ್ರಕಾಶ ಗ. ಖಾಡೆ
***
ಪ್ರೀತಿ
ಒಂದು ಒಗಟು
ಅದಕ್ಕೆ
ನೀನು ಉತ್ತರ
- ಡಾ.ಪ್ರಕಾಶ ಗ. ಖಾಡೆ
***
ಪ್ರಾಯದ
ದಂಡನೆಗೆ
ಜಯದ ಸೋಲು
ಅಭಿ
ಪ್ರಾಯದ ಮಾತು
ಬರೀ ಹೇಳಿಕೊಳ್ಳಲು
- ಡಾ.ಪ್ರಕಾಶ ಗ. ಖಾಡೆ
***
ಈ ದಿನಕೆ
ಇಷ್ಟು ಸಾಕು ಕವಿತೆ
ಇದು ನಿರಂತರ ಹೆರಿಗೆ
- ಡಾ.ಪ್ರಕಾಶ ಗ. ಖಾಡೆ
-
ವಿಳಾಸ:
ಡಾ.ಪ್ರಕಾಶ ಗ.ಖಾಡೆ, ’ಶ್ರೀಗುರು’ ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ. ಮೊ.9845500890
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)